The world is the great gymnasium where we come to make ourselves strong.
ವಿವೇಕಾನಂದ ವಸತಿನಿಲಯದ ನವೀಕೃತ ಪಾಕಶಾಲೆಯ ಉದ್ಘಾಟನೆ – ಡಾ.ಪ್ರಭಾಕರ್ ಭಟ್ ಕಲ್ಲಡ್ಕ
ತಾರೀಕು 17.11.2022.ಗುರುವಾರ ಸಂಜೆ 5.30 ಕ್ಕೆ ವಿವೇಕಾನಂದ ವಿಧ್ಯಾಸಂಸ್ಥೆಗಳ ವಿದ್ಯಾರ್ಥಿನಿಯರ ವಸತಿನಿಲಯದ ನವೀಕೃತ ಪಾಕಶಾಲೆಯ ಉದ್ಘಾಟನೆಯನ್ನು ಸಂಸ್ಥೆಯ ಎಲ್ಲಾ ಗಣ್ಯರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನದೊಂದಿಗೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ನೆರವೇರಿಸಲಿದ್ಧಾರೆ.
ಈ ಸಂಧರ್ಬದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ ಕೆ.ಎಂ ಕೃಷ್ಣ ಭಟ್ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ್ ನಾಯಕ್ ಮತ್ತು ವಸತಿ ನಿಲಯದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಭಾಗವಹಿಸಲಿದ್ಧಾರೆ ಎಂದು ವಿವೇಕಾನಂದ ವಿದ್ಯಾರ್ಥಿನಿಯರ ವಸತಿನಿಲಯದ ಮೇಲ್ವಿಚಾರಕಿ ಶ್ರೀಮತಿ ವಿಜಯಲಕ್ಷ್ಮೀಯವರು ಮಾಹಿತಿ ನೀಡಿರುತ್ತಾರೆ.