ವಿವೇಕಾನಂದ ವಸತಿನಿಲಯ ದೀಪಾಲಂಕೃತವಾದ – ತುಳಸಿ ಪೂಜೆ

ಭಾರತೀಯ ಸಂಸ್ಕೃತಿಯು ಇಲ್ಲದಾಗುತ್ತಿರುವ ಈ ಕಾಲಘಟ್ಟದಲ್ಲಿ ಭಾರತದ ಸಂಸ್ಕೃತಿಯ ಮುಖ್ಯ ಅಂಶವನ್ನು ಮುಂದಿಟ್ಟುಕೊಂಡು ವಿವೇಕಾನಂದ ವಸತಿ ನಿಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ದೀಪಾಲಂಕೃತವಾದ ತುಳಸಿ ಪೂಜೆಯನ್ನು ಅತ್ಯುನ್ನತ ರೀತಿಯಲ್ಲಿ ನಡೆಸಲಾಯಿತು.ತುಳಸಿ ಪೂಜೆಯ ಅಂಗವಾಗಿ ಮುಂಜಾನೆ  ವಸತಿ ನಿಲಯಗಳಲ್ಲಿ ಗಣಪತಿ ಹವನವು ನಡೆಯಿತು.ಈ ಕಾರ್ಯಕ್ರಮದಲ್ಲಿ ನಮ್ಮ ವಸತಿ ನಿಲಯದ ಅಧ್ಯಕ್ಷರಾದ ರಮೇಶ್ ಪ್ರಭು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಅಚ್ಚುತ್ ನಾಯಕ್ ಇವರು ಉಪಸ್ಥಿತರಿದ್ದರು.

ಒಗ್ಗಟ್ಟಿನ ಮಹತ್ವವನ್ನು ವ್ಯಕ್ತಪಡಿಸಿಕೊಂಡು ವಸತಿ ನಿಲಯದ ಮಕ್ಕಳು ಒಟ್ಟು ಸೇರಿ ಮಾವಿನ ಎಲೆಗಳ ತೋರಣಗಳಿಂದ ವಸತಿ ನಿಲಯವನ್ನು ಅಲಂಕರಿಸಿದರು.ಅದೇ ರೀತಿಯಲ್ಲಿ ತುಳಸಿ ಕಟ್ಟೆಯ ಎದುರು ರಂಗೋಲಿಯನ್ನು ಹಾಕಿ, ಕತ್ತಲನ್ನು ದೂರ ಪಡಿಸುವ ಬೆಳಕಿನ ಸಂಕೇತವಾಗಿ ಹಣತೆಯನ್ನು ಬೆಳಗಿಸಿದರು.

ನಂತರ ಸಂಜೆ 7 ಗಂಟೆಗೆ ಭಜನೆ ಹಾಗೂ ಕುಣಿತ ಭಜನೆಗಳಿಂದ ಕಾರ್ಯಕ್ರಮ ಮುಂದುವರೆಯಿತು. ನಂತರ ತುಳಸಿ ಕಟ್ಟೆಗೆ ಪೂಜೆ ಮಾಡಿ ಪ್ರಸಾದ ವಿತರಿಸಲಾಯಿತು.ರಾತ್ರಿ 8 ಗಂಟೆಯ ನಂತರ ಸಿಡಿಮದ್ದು ಪ್ರದರ್ಶನ ನಡೆಯಿತು. ನಂತರ ಸಿಹಿ ಊಟದೊಂದಿಗೆ ಈ ತುಳಸಿ ಹಬ್ಬವನ್ನು ಸಂಭ್ರಮಿಸುತ್ತ ಕೊನೆಗೊಳಿಸಿದೆವು.

         

ಈ ವಿಶೇಷ ಕಾರ್ಯಕ್ರಮದಿಂದಾಗಿ ಭಾರತೀಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕೆಂದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಅರಿತುಕೊಂಡರು.ಸಂಸ್ಕೃತಿಯು ಯಾವತ್ತು ಮರೆಯಾಗದ ಹಾಗೆ ಎಂದಿಗೂ ನೆಲೆ ನಿಲ್ಲಬೇಕು ಎಂಬುದು ನಮ್ಮೆಲ್ಲರ ಗುರಿಯಾಗಿರುತ್ತದೆ.

Photo Gallery

Error: the communication with Picasa Web Albums didn’t go as expected. Here’s what Picasa Web Albums said:





Error 404 (Not Found)!!1

404. That’s an error.

The requested URL /data/feed/api/user/hostel.vvs%40gmail.com?kind=album was not found on this server. That’s all we know.

ವಿವೇಕಾನಂದ ವಸತಿನಿಲಯ ದೀಪಾಲಂಕೃತವಾದ – ತುಳಸಿ ಪೂಜೆ

ವಿವೇಕಾನಂದ ವಸತಿನಿಲಯ ದೀಪಾಲಂಕೃತವಾದ – ತುಳಸಿ ಪೂಜೆ ಭಾರತೀಯ ಸಂಸ್ಕೃತಿಯು ಇಲ್ಲದಾಗುತ್ತಿರುವ ಈ ಕಾಲಘಟ್ಟದಲ್ಲಿ ಭಾರತದ ಸಂಸ್ಕೃತಿಯ ಮುಖ್ಯ ಅಂಶವನ್ನು ಮುಂದಿಟ್ಟುಕೊಂಡು ವಿವೇಕಾನಂದ ವಸತಿ ನಿಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ದೀಪಾಲಂಕೃತವಾದ ತುಳಸಿ ಪೂಜೆಯನ್ನು ಅತ್ಯುನ್ನತ ರೀತಿಯಲ್ಲಿ ನಡೆಸಲಾಯಿತು.ತುಳಸಿ ಪೂಜೆಯ ಅಂಗವಾಗಿ ಮುಂಜಾನೆ  ವಸತಿ ನಿಲಯಗಳಲ್ಲಿ ಗಣಪತಿ ಹವನವು ನಡೆಯಿತು.ಈ ಕಾರ್ಯಕ್ರಮದಲ್ಲಿ ನಮ್ಮ ವಸತಿ ನಿಲಯದ ಅಧ್ಯಕ್ಷರಾದ ರಮೇಶ್ ಪ್ರಭು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಅಚ್ಚುತ್ ನಾಯಕ್ ಇವರು ಉಪಸ್ಥಿತರಿದ್ದರು. ಒಗ್ಗಟ್ಟಿನ ಮಹತ್ವವನ್ನು ವ್ಯಕ್ತಪಡಿಸಿಕೊಂಡು ವಸತಿ […]

Read More